ಪ್ಲೂಗರ್, ಎಡ್ವಾರ್ಡ್ ಫ್ರೆಡ್ರಿಕ್ ವಿಲ್‍ಹೆಲ್ಮ್
	1829-1910. ಜರ್ಮನಿಯ ವೈದ್ಯ, ಜನನ ಜರ್ಮನಿಯ ಹಾನೌ ಎಂಬಲ್ಲಿ 1829 ಜೂನ್ 7ರಂದು. ಶರೀರಕ್ರಿಯಾವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿ ಮುಂದೆ ಬಾನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ (1859). ಶರೀರಕ್ರಿಯಾವಿಜ್ಞಾನಕ್ಕೆ ಸಂಬಂಧಿಸಿದ ಆವಿಷ್ಕಾರಗಳನ್ನು ಒಳಗೊಂಡ ನಿಯತಕಾಲಿಕವನ್ನು ಪ್ರಾರಂಭಿಸಿ ಅನೇಕ ವರ್ಷ ಅದರ ಸಂಪಾದಕನಾಗಿದ್ದ. 1878ರಲ್ಲಿ ಈತ ಸ್ಥಾಪಿಸಿದ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಬಹಳ ಖ್ಯಾತಿ ಗಳಿಸಿತು. ಈತನ ಸಂಶೋಧನೆಗಳ ಪೈಕಿ ಮುಖ್ಯವಾದವು: ನರಗಳು ಹಾಗೂ ಅವುಗಳ ಕ್ರಿಯೆ, ಚೋದಕ ವ್ಯವಸ್ಥೆಯ ಅಂಗಭಾಗಗಳ ನಿಜಗೆಲಸಗಳು, ಉಪಾಪಚಯ ಕ್ರಿಯೆ ಅಂಗಾಂಶಗಳಲ್ಲಿ ಉಸಿರಾಟ ಕುರಿತಂತೆ ವಿಶೇಷ ಅಧ್ಯಯನ ನಡೆಸಿದ್ದಾನೆ. 1910 ಮಾರ್ಚ್ 16ರಂದು ಬಾನ್‍ನಲ್ಲಿ ಗತಿಸಿದ.
(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ